Song : bharatabhoomi nanna tAyi ರಚನೆ : ಕುವೆಂಪು ಸಂಗೀತ : ಅನಾಮಿಕ ಮೂಲ ಗಾಯನ : ಅನಾಮಿಕ ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು ಜೀವನವನ್ನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು ತುಹಿನ ಗಿರಿಯ ಸಿರಿಯ ಮುಡಿಯ ಬಯಲುಗಳನು ತೊಳೆಯುವಡಿಯ ಪೈರು ಪಚ್ಛೆ ಪಸಿರಿನಡಿಯ ಭರತ ಭೂಮಿ ನನ್ನ ತಾಯಿ ಸಿಂಧು ಯಮುನೆ ದೇವ ಗಂಗೆ ತಪತಿ ಕೃಷ್ಣೆ ಭದ್ರೆ ತುಂಗೆ ಸಲಿಲ ತೀರ್ಥ ಪುಣ್ಯ ರಂಗೆ ಭರತ ಭೂಮಿ ನನ್ನ ತಾಯಿ ಮತದ ಬಿರುಕುಗಳನು ತೊರೆವೆ ನುಡಿಗಲೊಡಕುಗಳನು ಮರೆವೆ ತೊತ್ತ ತೊಡಕುಗಳನು ಬಿರಿವೆ ಜೀವನವನೆ ದೇವಿಗೆರೆವೆ ।।